ಶತಮಾನದ ಭಾರೀ ದೊಡ್ಡ ಸುಳ್ಳು The Biggest Lie Of The Century

ಶತಮಾನದ ದೊಡ್ಡ ಸುಳ್ಳು

ಬಿಜೆಪಿ ಪಕ್ಷವು ಚುನಾವಣೆಗೆ ಮುಂಚೆ ವಿದೇಶಗಳಲ್ಲಿರುವ ಕಪ್ಪು ಹಣವನ್ನು 100 ದಿನಗಳಲ್ಲಿ ವಾಪಸ್ಸು ತಂದು ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ರೂ. ಹಣವನ್ನು ನೀಡುತ್ತೇವೆ ಎಂದು ಹೇಳಿದ್ದರೆಂಬ ಆರೋಪವಿದೆ. ಇಲ್ಲ, ಈ ರೀತಿ ಹೇಳಿರಲಿಲ್ಲ ಎಂದು ಅವರು ಈಗ ಹೇಳುತ್ತಿದ್ದಾರೆ. ವಾಸ್ತವವೇನು?
120 ಕೋಟಿ ಜನರಿಗೆ ತಲಾ 15 ಲಕ್ಷ ರೂ ಹಣ ನೀಡುವಷ್ಟು ಕಪ್ಪು ಹಣ ಇರುವುದಾದರೆ, ಅದರ ಒಟ್ಟು ಪ್ರಮಾಣ 1,800 ಲಕ್ಷ ಕೋಟಿಗಳಾಗುತ್ತದೆ. ಇದುವರೆಗೆ ವಿದೇಶಗಳಲ್ಲಿರುವ ಕಪ್ಪುಹಣದ ಪ್ರಮಾಣದ ಕುರಿತು ಅತೀ ದೊಡ್ಡ ಸಂಖ್ಯೆ (ಅದೂ ಉತ್ಪ್ರೇಕ್ಷಿತ) ಹೇಳಿರುವುದು ಬಾಬಾ ರಾಮ್‍ದೇವ್, 500 ಲಕ್ಷ ಕೋಟಿ ರೂ.ಗಳು. ಹಾಗಾದರೆ ಮೋದಿಯವರು 1,750 ಕೋಟಿ ರೂ ಪ್ರಮಾಣದ ಸುಳ್ಳು ಹೇಳಿದ್ದರೇ? ವಿದೇಶದಲ್ಲಿರುವ ಕಪ್ಪು ಹಣದ ಪ್ರಮಾಣವನ್ನು ಸಿಬಿಐ 50 ಲಕ್ಷ ಕೋಟಿ ರೂ.ಗಳೆಂದು ಹೇಳಿತ್ತು. ಇದುವರೆಗೆ ಮಾಡಲಾಗಿರುವ ವಿವಿಧ ಅಂದಾಜುಗಳು ವಿದೇಶದಲ್ಲಿರುವ ಕಪ್ಪು ಹಣದ ಪ್ರಮಾಣವನ್ನು 70ರಿಂದ 90 ಲಕ್ಷ ಕೋಟಿ ರೂ.ಗಳಷ್ಟಕ್ಕೆ ತಂದು ನಿಲ್ಲಿಸುತ್ತವೆ.

 

ಈಗ ಬಿಜೆಪಿ ಏನು ಹೇಳಿತ್ತು ನೋಡೋಣ

“ಈ ಕಳ್ಳ ಮತ್ತು ಲೂಟಿಕೋರ ಜನರ ದುಡ್ಡು ವಿದೇಶೀ ಬ್ಯಾಂಕುಗಳಲ್ಲಿ ಜಮಾ ಆಗಿದೆಯಲ್ಲಾ, ಅದನ್ನು ನಾವು ಭಾರತಕ್ಕೆ ತಂದರೆ, ಭಾರತದ ಪ್ರತಿ ಒಬ್ಬೊಬ್ಬ ಬಡ ವ್ಯಕ್ತಿಗೂ 15ರಿಂದ 20 ಲಕ್ಷ ಪುಗಸಟ್ಟೆ ಸುಲಭವಾಗಿ ಸಿಕ್ಕಿಬಿಡುತ್ತದೆ. ಅಷ್ಟೊಂದು ಹಣ ಇದೆ” – ಮೋದಿಯವರು ಈ ಮಾತುಗಳನ್ನು ಹೇಳಿದ ವಿಡಿಯೋ ಲಭ್ಯವಿದೆ.

ಈ ವಿಡಿಯೋವನ್ನು ಮೋದಿಯವರ ವಿರೋಧಿಗಳು ಮಾತ್ರವಲ್ಲದೇ, ಬಿಜೆಪಿಯವರು ಸಹಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯವರ ವಾದ ಏನು ಎಂದರೆ, ಇದರಲ್ಲಿ ನಾವು ಎಷ್ಟು ದಿನಗಳ ಒಳಗೆ ಈ ಹಣವನ್ನು ತರುತ್ತೇವೆಂತಲೋ, ಅಕೌಂಟಿಗೆ ಹಾಕುತ್ತೇವೆ ಎಂತಲೋ ಹೇಳಿಲ್ಲ. ಕಪ್ಪು ಹಣ ವಾಪಸ್ಸು ತಂದರೆ ಭಾರತದ ಬಡವರಿಗೆ ಇಂತಿಷ್ಟು ಸಿಗುತ್ತದೆ ಎಂದು ಮಾತ್ರ ಹೇಳಲಾಗಿತ್ತು.
ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ, ಈಗ ಕೇಂದ್ರ ಗೃಹ ಸಚಿವರಾಗಿದ್ದ ರಾಜನಾಥ್‍ಸಿಂಗ್ 100 ದಿನದಲ್ಲಿ ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಹೇಳಿದ್ದರು ಎಂಬ ಕುರಿತು ಪತ್ರಿಕಾ ವರದಿಗಳಿವೆ. (ವಿಡಿಯೋ ಹಾಕಬೇಕು, ಯಾರಾದರೂ ನೋಡುಗರು ಅದು ಸಿಕ್ಕರೆ ನಮಗೆ ತಿಳಿಸಿ)

 

ಇನ್ನು ಬಿಜೆಪಿಯ ಪ್ರಣಾಳಿಕೆ ಏನು ಹೇಳಿತ್ತು?

ಭ್ರಷ್ಟಾಚಾರವನ್ನು ತಡೆಗಟ್ಟುವ ಮೂಲಕ ನಾವು ಕಪ್ಪುಹಣದ ಉತ್ಪತ್ತಿಯನ್ನು ತಡೆಗಟ್ಟುತ್ತೇವೆ, ಕಪ್ಪು ಹಣವನ್ನು ವಾಪಸ್ ತರಲು ಅಗತ್ಯವಿರುವ ಹೊಸ ಕಾನೂನು ತರುತ್ತೇವೆ ಮತ್ತು ಭಾರತದ ಹಣ ಎಲ್ಲೆಲ್ಲಿ ಹೋಗಿದೆಯೋ ಅದನ್ನು ಸಂಪೂರ್ಣವಾಗಿ ವಾಪಸ್ ತರುತ್ತೇವೆ.
ಪದೇ ಪದೇ ವಿದೇಶೀ ಬ್ಯಾಂಕುಗಳಲ್ಲಿರುವ ಪ್ರತಿ ಪೈಸೆ, ಪ್ರತಿ ರೂಪಾಯಿಯನ್ನು ವಾಪಸ್ ತರಲಾಗುವುದು ಎಂದು ಹಲವು ಸಾರಿ ಮೋದಿಯವರು ಸೇರಿದಂತೆ ಹಲವು ಬಿಜೆಪಿ ನಾಯಕರು ಹೇಳಿದ್ದಾರೆ. ಇದಕ್ಕೆ ಪುರಾವೆಯನ್ನು ಹಾಕುವ ಅಗತ್ಯವಿಲ್ಲ. ಎಲ್ಲರಿಗೂ ಇದು ಗೊತ್ತಿದೆ.
ಈಗ ನಾವು ಬಿಜೆಪಿಯ ಕುರಿತು ಬಹಳ ಉದಾರವಾಗಿ ನಡೆದುಕೊಂಡು, ಅವರ ವಾದದ ಪರವಾಗಿಯೇ ನಿಂತು ಲೆಕ್ಕ ಹಾಕೋಣ.
ಮೊದಲಿಗೆ ಮೋದಿಯವರ ಮಾತುಗಳ ಕುರಿತ ಲೆಕ್ಕಾಚಾರ:
ಭಾರತದಲ್ಲಿ ಎಷ್ಟು ಸಂಖ್ಯೆಯ ಬಡವರಿದ್ದಾರೆ ಎಂಬ ಕುರಿತು ವಿವಿಧ ಅಂದಾಜುಗಳಿವೆ. ಶೇ.30ರಿಂದ ಶೇ.60ರವರೆಗೆ ಲೆಕ್ಕ ಹಾಕುವವರಿದ್ದಾರೆ. ನಾವು ಅದರ ಸರಾಸರಿ ತೆಗೆದುಕೊಳ್ಳೋಣ. ಅಂದರೆ ಶೇ.45. 120 ಕೋಟಿಯಲ್ಲಿ 54 ಕೋಟಿ ಜನರು.
54 ಕೋಟಿ * 15ಲಕ್ಷ = 810 ಲಕ್ಷ ಕೋಟಿ. ಅಷ್ಟು ಕಪ್ಪುಹಣ ವಿದೇಶಗಳಲ್ಲಿ ಇದೆಯೇ? ಇದ್ದರೆ ಅದನ್ನು ಭಾರತಕ್ಕೆ ತಂದರೇ?
ಮೋದಿಯವರ ಪರವಾಗಿ ಸುಳ್ಳು ಪ್ರಚಾರ ಮಾಡುವ ಪಡೆ ನಿಜಕ್ಕೂ ಪ್ರತಿಯೊಬ್ಬ ಭಾರತೀಯರಿಗೂ 15 ಲಕ್ಷ ರೂ. ಸಿಗುತ್ತದೆ ಎಂಬಂತೆಯೇ ಪ್ರಚಾರ ಮಾಡಿದ್ದರು. ಪ್ರತಿಯೊಬ್ಬ ಭಾರತೀಯರಿಗೂ 15 ಲಕ್ಷ ಸಿಗಬೇಕೆಂದರೆ, 120 ಕೋಟಿ ಜನಸಂಖ್ಯೆ * 15 ಲಕ್ಷ ಅಂದರೆ 1800 ಲಕ್ಷ ಕೋಟಿಗಳು ಬೇಕಾಗುತ್ತವೆ. ನಾವು ಅಷ್ಟೊಂದು ಕಪ್ಪುಹಣ ಇದೆ ಎಂದು ಹೇಳಿಯೇ ಇಲ್ಲ ಎನ್ನುತ್ತಾರಾ?
ಪರಮ ಮೋದಿ ಭಕ್ತರಾದ ಕರ್ನಾಟಕದ ಯುವಾ ಬ್ರಿಗೇಡ್‍ನ ನೇತಾರ ಸೂಲಿಬೆಲೆ ಇದನ್ನು ಯಾವ ಪ್ರಮಾಣಕ್ಕೆ ಉತ್ಪ್ರೇಕ್ಷಿಸಿ ಹೇಳಿದ್ದಾರೆಂಬುದರ ಕುರಿತು ಆಡಿಯೋ ಲಭ್ಯವಿದೆ.

 

ಅವರ ಪ್ರಕಾರ (ಅಥವಾ ಅವರು ಉಲ್ಲೇಖಿಸುವ ಬಿಜೆಪಿ ಪರ ಅರ್ಥಶಾಸ್ತ್ರಜ್ಞರ ಪ್ರಕಾರ) ಹೊರದೇಶಗಳಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದರೆ, ಮುಂದಿನ 36 ವರ್ಷಗಳ ಕಾಲ ದೇಶದ ಯಾರಿಗೂ ತೆರಿಗೆ ಹಾಕುವ ಅಗತ್ಯವೇ ಇಲ್ಲದೆ ಬಜೆಟ್ ರೂಪಿಸಬಹುದು ಅಥವಾ ದೇಶದ ಎಲ್ಲಾ ಹೆದ್ದಾರಿಗಳನ್ನು ಚಿನ್ನದಲ್ಲೇ ಮಾಡಬಹುದು. ಒಂದು ವೇಳೆ ಭಾರತದಲ್ಲಿರುವ ಕಪ್ಪು ಹಣವನ್ನೂ ಹೊರತೆಗೆದರೆ, ನಿಮ್ಮ ನಿಮ್ಮ ಮನೆಗಳಿಂದ ಹೆದ್ದಾರಿಗಳವರೆಗಿನ ಎಲ್ಲಾ ರಸ್ತೆಗಳನ್ನೂ ಚಿನ್ನದಲ್ಲೇ ಮಾಡಬಹುದು.

ಇಂತಹ ಹಸೀ ಹಸೀ ಸುಳ್ಳನ್ನು ಅವರೆಲ್ಲರೂ ಸೇರಿ ದೇಶಕ್ಕೆ ಹೇಳಿದ್ದರು.

100 ದಿನಗಳ ನಂತರ ಆ ಪ್ರಶ್ನೆ ಮೇಲೆ ಬಂದಿತು. ಎಲ್ಲಿ ನಮ್ಮ ಅಕೌಂಟಿಗೆ 15 ಲಕ್ಷ ಬರಲಿಲ್ಲ ಎಂದು ಜನರು ಕೇಳಲಾರಂಭಿಸಿದರು. ಒಂದು ವರ್ಷ ಅಂದರೆ 365 ದಿನಗಳಾದವು, ಎರಡು ವರ್ಷ ಅಂದರೆ 730 ದಿನಗಳಾದವು. ಈಗ 1000 ದಿನಗಳ ಹತ್ತಿರಕ್ಕೆ ಹೋಗುತ್ತಿದ್ದೇವೆ. ಒಂದೇ ಒಂದು ರೂಪಾಯಿ ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ಬರಲಿಲ್ಲ. ಅದರಲ್ಲೂ ದೊಡ್ಡ ಕುಳಗಳನ್ನು ಮುಟ್ಟುವ ಗೋಜಿಗೇ ಹೋಗಲಿಲ್ಲ.

 

ಈ ಕಾರಣದಿಂದ ಮೋದಿ ಸರ್ಕಾರಕ್ಕೆ ಇನ್ನೊಂದು ದೊಡ್ಡ ಸುಳ್ಳು ಹೇಳುವ ಅಗತ್ಯ ಉಂಟಾಯಿತೇ?

ಆ ದೊಡ್ಡ ಸುಳ್ಳನ್ನೇ ನವೆಂಬರ್ 8ರ ರಾತ್ರಿ 8ಕ್ಕೆ ದೇಶದ ಪ್ರಧಾನಿ ಹೇಳಿದರೇ?

ಇದು ಜನದ್ರೋಹವಲ್ಲವೇ? ಭಾರತದ ಪ್ರಧಾನಿ ಜನದ್ರೋಹಿಯಾಗಬಾರದು.

ಅದೇನೇ ಇರಲಿ, ಕಪ್ಪುಹಣ ಅದೆಷ್ಟೇ ಇರಲಿ, ಅದನ್ನು ಹೊರತರುವುದು ಅತ್ಯಂತ ಅಗತ್ಯ. ಕಪ್ಪುಹಣವನ್ನು ವಿದೇಶಗಳಲ್ಲಿ ಇಟ್ಟಿರುವವರನ್ನು ದೇಶದ್ರೋಹಿಗಳೆಂದು ಘೋಷಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅದಕ್ಕಾಗಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಏನು ಮಾಡುತ್ತದೋ ಬಿಡುತ್ತದೋ ನಾವಂತೂ ಮಾಡೋಣ. ಆದರೆ, ಅದನ್ನು ಮಾಡುವಲ್ಲಿ, ಬಿಜೆಪಿ ಸರ್ಕಾರಕ್ಕೆ, ನರೇಂದ್ರ ಮೋದಿಯವರಿಗೆ ಎಷ್ಟು ಬದ್ಧತೆಯಿದೆ? ಅದನ್ನು ಮುಂದಿನ ವಿಭಾಗಗಳಲ್ಲಿ ನೋಡೋಣ.

 

(ನಾವು ಇಲ್ಲಿ ಬರೆಯುವ ಯಾವುದೇ ಮಾತನ್ನು ಉತ್ಪ್ರೇಕ್ಷಿಸಿ ಹೇಳುವುದಿಲ್ಲ, ಸುಳ್ಳು ಹೇಳುವುದಿಲ್ಲ. ಒಂದು ವೇಳೆ ಅಂತಹ ತಪ್ಪು ಆಗಿದ್ದು, ಯಾರಾದರೂ ಅದನ್ನು ಎತ್ತಿ ತೋರಿಸಿದರೆ, ನಾವು ಬದಲಿಸಿಕೊಳ್ಳುತ್ತೇವೆ)

Save

Save

Save

Save

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s