ಕಪ್ಪು ಹಣ & ಕಪ್ಪು ಸಂಪತ್ತು Black Money & Black Wealth

ಹೌದು, ಕಪ್ಪುಹಣ ಹೊರಗೆ ಬರಲಿಲ್ಲ, ಆದರೆ ನೋಡುತ್ತಿರಿ, ಬ್ಯಾಂಕ್ ಅಕೌಂಟ್‍ಗಳಿಂದ ಕಪ್ಪುಹಣವನ್ನು ಹಿಡಿದು ಬಿಡುತ್ತೇವೆ.

ನೋಟು ರದ್ದತಿಯ ನಂತರ 3ರಿಂದ 5 ಲಕ್ಷ ಕೋಟಿ ರೂ.ಗಳಷ್ಟು ಹಣ ಬ್ಯಾಂಕುಗಳಿಗೆ ವಾಪಸ್ಸು ಬರುವುದಿಲ್ಲ. ಅದೇ ಕಪ್ಪುಹಣ ಎಂದು ಸರ್ಕಾರ ಭಾವಿಸಿತ್ತು. ಅದನ್ನೇ ಪತ್ರಿಕೆಗಳಿಗೂ ಹೇಳಿದರು, ಸುಪ್ರಿಂಕೋರ್ಟಿಗೂ ಹೇಳಿದರು.

ಕೊನೆಗೆ ಅದರಲ್ಲಿ ಅರ್ಧವಿರಲಿ, 10ನೇ ಒಂದು ಭಾಗವೂ ಪತ್ತೆಯಾಗಲಿಲ್ಲ. ಎಲ್ಲಾ ಹಣವೂ ಬಂದು ಬಿಟ್ಟಿತು. ಇದೀಗ ಮೋದಿಯವರ ಪ್ರಚಾರ ತಂಡ ಹೊಸದೊಂದು ಮಾತನ್ನು ಹೇಳುತ್ತಿದೆ. ‘ಸರ್ಕಾರವೇನು ಸುಮ್ಮನೆ ಇರುತ್ತದೆ ಎಂದುಕೊಂಡಿದ್ದೀರಾ? ಖಂಡಿತಾ ಇಲ್ಲ. ಈಗ ಯಾವ್ಯಾವ ಅಕೌಂಟ್‍ಗಳಿಗೆ ಹಣ ಜಮೆ ಆಗಿದೆಯೋ (ಜನಧನ್ ಒಳಗೊಂಡು) ಅವೆಲ್ಲವನ್ನೂ ಜಾಲಾಡಿ ಕಪ್ಪುಹಣವನ್ನು ಪತ್ತೆ ಹಚ್ಚಲಾಗುತ್ತದೆ, ನೋಡುತ್ತಿರಿ’ ಎಂಬುದು ಅವರ ಅಂಬೋಣ. ವಾಸ್ತವವೇನು?

  • ಆದಾಯ ತೆರಿಗೆ ಇಲಾಖೆಯ ಮೂಲಗಳ ಪ್ರಕಾರ ಒಂದು ವರ್ಷಕ್ಕೆ ಅವರು ಪರಿಶೀಲಿಸಲಾಗುತ್ತಿರುವುದು 2 ಕೋಟಿ ತೆರಿಗೆ ಪಾವತಿದಾರರ ಲೆಕ್ಕವನ್ನು ಮಾತ್ರ. ಏಕೆಂದರೆ, ದೊಡ್ಡ ಪ್ರಮಾಣದ ಸಿಬ್ಬಂದಿ ಕೊರತೆ ಅದಕ್ಕಿದೆ. ದೇಶದಲ್ಲಿ ಅದಕ್ಕಿಂತ ಎಷ್ಟೋ ಹೆಚ್ಚು ಜನರು ಆದಾಯದ ಲೆಕ್ಕವನ್ನು ನೀಡಿದರೂ, ಪರಿಶೀಲನೆಗೆ ಒಳಗಾಗುವುದು 2 ಕೋಟಿ ಖಾತೆಗಳಷ್ಟೇ. ಆದರೆ ಅರುಣ್ ಜೇಟ್ಲಿ ಹೇಳುತ್ತಿರುವುದು ಒಂದು ವರ್ಷಕ್ಕೆ 3.5 ಕೋಟಿ ಖಾತೆಗಳನ್ನು ಪರಿಶೀಲಿಸಬೇಕೆಂದು. ಹಾಗೆ ಮಾಡಿದರೂ ಒಟ್ಟು 25 ಕೋಟಿ ಖಾತೆಗಳನ್ನು ಪರಿಶೀಲಿಸಲು 8 ವರ್ಷಗಳು ಬೇಕು!!!
  • ಆದಾಯ ತೆರಿಗೆ ಇಲಾಖೆ ಇನ್ನೂ ಒಂದು ಮಾತು ಹೇಳಿದೆ. ಅವರು 2 ಕೋಟಿ ಖಾತೆಗಳನ್ನು ಜಾಲಾಡಿ, ಕೆಲವರ ಮೇಲೆ ಮೊಕದ್ದಮೆ ಹಾಕಿದರೂ, ರೈಡುಗಳನ್ನು ಮಾಡಿ ಮೊಕದ್ದಮೆ ಮಾಡಿದರೂ, ಅಂತಿಮವಾಗಿ ಶೇ.95ರಷ್ಟು ರೈಡುಗಳಲ್ಲಿ ಜಪ್ತಿ ಮಾಡಿದ ಹಣವನ್ನು ವಾಪಸ್ಸು ಕೊಡಬೇಕಾಗುತ್ತಿದೆ. ಅವರೆಲ್ಲರೂ ಸಾಚಾ ಎಂದಲ್ಲ. ಇವರೆಲ್ಲರ ಕೇಸುಗಳ ಹಿಂದೆ ಬಿದ್ದು, ಕೆಲಸ ಮಾಡುವುದು ಆಗುತ್ತಿಲ್ಲವೆನ್ನುವ ಕಾರಣಕ್ಕೆ.
  • ಈಗ ಹೇಳಿ ಈಗ 25 ಕೋಟಿ ಖಾತೆಗಳನ್ನು ಈ ಸರ್ಕಾರವು ಜಾಲಾಡುವುದುಂಟೇ? ಒಂದಾದ ಮೇಲೆ ಒಂದರಂತೆ ಸುಳ್ಳಿನ ಮೂಟೆಗಳನ್ನು ಉದುರಿಸುವುದಷ್ಟೇ ಇವರ ಕೆಲಸ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s