ಕ್ಯಾಷ್‍ಲೆಸ್ ಆರ್ಥಿಕತೆ Cashless Economy

ಭಾರತವು ಇದ್ದಕ್ಕಿದ್ದಂತೆ ಡಿಜಿಟಲ್ ಆಗಲು ಸಾಧ್ಯವೇ? ಇಂತಹ ಮೋಸ ಸರಿಯೇ ಮೋದಿಯವರೇ?

ಭಾರತವನ್ನು ಡಿಜಿಟಲ್ ಮಾಡಲು ಏಪ್ರಿಲ್ 2016 ರಂದು ಕೇಂದ್ರ ಸರ್ಕಾರ ಒಂದು ಸಮಿತಿ ನೇಮಿಸಿತ್ತು. ಅದು ರತನ್ ವಟಲ್ ಸಮಿತಿ. ಅದು ಆರಂಭದಲ್ಲಿ ಕ್ಯಾಶ್ ಲೆಸ್ ವಹಿವಾಟು ಆರಂಭಿಸಲು ಭಾರತದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂಬ ಅಭಿಪ್ರಾಯದಲ್ಲಿತ್ತು. ಅದಕ್ಕೆ ಸಾಕ್ಷಿಯಾಗಿ ಕೆಳಗಿನ ATM ಮತ್ತು ಡೆಬಿಟ್ ಕಾರ್ಡ್ ಮಾಹಿತಿ ನೀಡಿತ್ತು. ಅಷ್ಟೆ ಏಕೆ ಪ್ರದಾನಿ ನರೇಂದ್ರ ಮೋದಿಯವರೇ 2015ರ ನವೆಂಬರ್ 6ರಂದು ‘Reforming to transform is marathon, not a sprint’ (Extracts from the Hon’ble Prime Minister’s Address at Delhi Economics Conclave, 6 November 2015) ಎಂದಿದ್ದರು. ಅಂದರೆ, ಬದಲಾವಣೆ ಸಾಧಿಸಲು ಸುಧಾರಣೆಗಳನ್ನು ತರುವುದೆಂದರೆ ಅದು ಮ್ಯಾರಥಾನ್ – ದೀರ್ಘ ಓಟ – ಇದ್ದಂತೆ; ವೇಗದ ಸಣ್ಣ ಓಟದಂತಲ್ಲ ಎಂದು.

ಆದರೆ ನೋಟು ಅಮಾನ್ಯೀಕರಣದಿಂದಾದ ಭಾರೀ ಪ್ರಮಾದವನ್ನು ಮನಗಂಡ ಕೇಂದ್ರ ಸರ್ಕಾರ ಮೆಲ್ಲನೆ ‘ನಗದುರಹಿತ ವಹಿವಾಟಿ’ಗಾಗಿ ಈ ನಡೆ ಎಂದು ಜನತೆಯನ್ನು ನಂಬಿಸುವ ಪ್ರಯತ್ನ ಆರಂಭಿಸಿತು. ಅದಕ್ಕೆ ತಕ್ಕಂತೆ ರತನ್ ವಟಲ್ ಕಮಿಟಿಗೂ ಸೂಚನೆ ಹೋಯಿತು. ಆ ಸಮಿತಿಯು ಕೇಂದ್ರ ಸರ್ಕಾರದ ಬೆನ್ನಿಗೆ ನಿಂತು ‘ಲೆಸ್ ಕ್ಯಾಶ್’ ಮಾಡುವ ವರದಿಯನ್ನು ಡಿಸೆಂಬರ್ 9 ರಂದು ನೀಡಿತು. ತಮಾಷೆಯೆಂದರೆ, ಅದೇ ವರದಿಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಡಿಜಿಟಲ್ ಮೂಲಭೂತ ಸೌಲಭ್ಯಗಳು ಅದೆಷ್ಟು ಹೀನಾಯ ಪರಿಸ್ಥಿತಿಯಲ್ಲಿವೆ ಎಂದೂ ತಿಳಿಸಿದೆ. ಉದಾಹರಣೆಗೆ: 10 ಲಕ್ಷ ಜನಸಂಖ್ಯೆಗೆ ಆಸ್ಟ್ರೇಲಿಯಾದಲ್ಲಿ 1329 ATM ಗಳಿವೆ, ಕೆನಡಾದಲ್ಲಿ 1854, ಅಷ್ಟೇ ಏಕೆ ದಕ್ಷಿಣ ಆಫ್ರಿಕಾದಲ್ಲಿ 533 ATM ಗಳು. ಆದರೆ ನಮ್ಮ ಭಾರತದಲ್ಲಿ 10 ಲಕ್ಷ ಭಾರತೀಯರಿಗೆ ಕೇವಲ 165 ATM ಗಳಿವೆ!

atms

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s