Why This Campaign?

ಕಪ್ಪು ಹಣ ಹೊರಕ್ಕೆ ಬರಲೇಬೇಕು. ಕೋಟಿಗಟ್ಟಲೆ ಕಪ್ಪು ಹಣ ಇಟ್ಟುಕೊಂಡಿರುವವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು. ಭ್ರಷ್ಟಾಚಾರ ತಡೆಗಟ್ಟಬೇಕು. ಭಯೋತ್ಪಾದನೆ, ಖೋಟಾ ನೋಟಿಗೆ ಅವಕಾಶವೇ ಇರಬಾರದು. ಇದು ನಮ್ಮದೂ ನಿಲುವು.

ಆದರೆ, ಮೋದಿಯವರ ನೋಟು ರದ್ದು ಕ್ರಮದಿಂದ ಇವು ಸಾಧನೆಯಾಗುತ್ತದೆಯೇ? ಕೇಂದ್ರ ಸರ್ಕಾರ ನಿಜಕ್ಕೂ ಕಪ್ಪು ಹಣದ ವಿರುದ್ಧ ಗಂಭೀರವಾಗಿದೆಯೇ? ಅಥವಾ ಕಪ್ಪು ಹಣವನ್ನು ಪೋಷಿಸುತ್ತಿದೆಯೇ? ಇದರ ಅಸಲೀ ಮುಖದ ಅನಾವರಣ ನಮ್ಮ ಉದ್ದೇಶ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಶದ ಪ್ರಧಾನಿ ನಿರಂತರವಾಗಿ ಸುಳ್ಳು ಹೇಳುವ ಮತ್ತು ಜನದ್ರೋಹದ ಕೆಲಸ ಮಾಡುವಂತಹ ಪ್ರಧಾನಿ ಎಂದು ಹೆಸರು ಪಡೆದುಕೊಳ್ಳಬಾರದು.

ನಮ್ಮ ನಿಲುವು ಸುಳ್ಳಿರಬಹುದೇ? ನಮ್ಮ ಉತ್ಪ್ರೇಕ್ಷೆ ಮಾಡುತ್ತಿದ್ದೇವೆಯೇ? ವಿರೋಧಕ್ಕಾಗಿ ವಿರೋಧಿಸುತ್ತಿದ್ದೇವೆಯೇ? ಆರೋಗ್ಯಕರವಾದ, ತಾರ್ಕಿಕ ಚರ್ಚೆಗೆ ನಾವು ಸಿದ್ಧರಿದ್ದೇವೆ. ಸುಖಾಸುಮ್ಮನೆ ಆರೋಪಗಳು, ಕೆಳಮಟ್ಟದ ಟೀಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಬಗೆಯ ಭಿನ್ನ ಅಭಿಪ್ರಾಯಕ್ಕೆ ಮುಕ್ತ ಮನಸ್ಸು ಹೊಂದಿದ್ದೇವೆ.

ಬನ್ನಿ, ದೇಶವನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ. ಕಪ್ಪುಸಂಪತ್ತು ಸೃಷ್ಟಿಯಾಗುವ ಮೂಲಕ್ಕೇ ಪೆಟ್ಟು ಕೊಡಬೇಕು. ಜನಸಾಮಾನ್ಯರ ಪರವಾಗಿ ನಾವು ನೀವೆಲ್ಲರೂ ನಿಲ್ಲಬೇಕು. ಅದಕ್ಕಾಗಿ ನಾವು ನೀವೆಲ್ಲರೂ ಜೊತೆಯಾಗಿ ನಿಲ್ಲೋಣ.

6 thoughts on “Why This Campaign?

 1. R.G.CHINNASWAMY says:

  I am of the opinion that the BJP Gnvt headed by Mr.Narendra Modi is a gimmick govt as it is alluring the people in many ways and mesmarised people of this country like a Mantravadi and people have been fooled.

  Like

 2. ಶರಣಗೌಡ says:

  ಪ್ರಧಾನಿ ಯವರು ನೋಟು ವಿಚಾರವಾಗಿ ಹಳೆಯ ರೀತಿ ವಿಚಾರ ಮಾಡಿದ್ದಾರೆ. ….
  ಇನ್ನು ಸಂಶೋಧನೆ ಮಾಡಿ ಉತ್ತಮ ನೋಟು ತರಬಹುದಿತ್ತು. …
  ಎಲ್ಲಾ ನೋಟು 10 20 50 100 500 1000 ಎಲ್ಲ ಬಗೆಯ ನೋಟು ರದ್ದು ಮಾಡಿ ಹೊಸ ನೋಟು ತರಬೇಕಿತ್ತು. ….
  ಒಂದು ದಿನಕ್ಕೆ ಎಷ್ಟಾದರು ಹಣವನ್ನು ಹಾಕಿ ಮರಳಿ ತಗೆದು ಕೊಳ್ಳುವ ಅವಕಾಶ ಇರಬೇಕಿತ್ತು. … ಆವಾಗ ನಿಜವಾದ ಕಳ್ಳರು ಸಿಕ್ಕಿ ಬಿಳುತ್ತಿದ್ದರು. …

  Like

 3. ABRAR AHMED says:

  ಇವತ್ತಿನ ದುರಂತ ಏನೆಂದರೆ ಮೋದಿ ಸರ್ಕಾರ ನೋಟ್ ರದ್ದತಿಯ ನಾಟಕವಾಡುತ್ತಾ 24×7 ಪ್ರಚಾರಯಂತ್ರದ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದೆ. ಜನರನ್ನು ಭಾವನಾತ್ಮಕ ಮಾತುಗಳ ಮೂಲಕ ವಂಚಿಸಲಾಗುತ್ತಿದೆ. ಮೋದಿ ಎಂದರೆ ದೇಶವನ್ನು ಉದ್ದಾರ ಮಾಡಲೆಂದು ಜನ್ಮವೆತ್ತಿ ಬಂದ ಪವಾಡ ಪುರುಷನೋ ಎಂಬಂತೆ ನಂಬಿಸಲಾಗುತ್ತಿದೆ. ಗಡಿಕಾಯುವ ಸೈನಿಕರಿಗೆ ಹೋಲಿಸಿದರೆ ಜನರ ಸಂಕಷ್ಟಗಳು ನಗಣ್ಯ ಎಂದು ಬಿಂಬಿಸಲಾಗುತ್ತಿದೆ. ಇಂದು ಒಂದಿಷ್ಟು ಕಷ್ಟವಾದರೂ ಶೀಘ್ರದಲ್ಲೇ ಭಾರಿ ಕ್ರಾಂತಿಕಾರಿ ಬದಲಾವಣೆಯಾಗಿ “ಒಳ್ಳೆಯ ದಿನಗಳು” ಬರಲಿವೆ ಎಂದು ಜನರ ಮಿದುಳನ್ನು ತೊಳೆಯಲಾಗುತ್ತಿದೆ. ಪರಿಣಾಮವಾಗಿ ದಶಕಗಳು ಉರುಳಿದರೂ ಕಡಿಮೆಯಾಗುವ ಬದಲು ದಿನೇ ದಿನೇ ಹಿಚ್ಚುತ್ತಲೇ ಇರುವ ಭ್ರಷ್ಟಾಚಾರ ಕಾಳದಂಧೆಗಳಿಂದ ಬೇಸತ್ತ ಜನಸಾಮಾನ್ಯರು ಮೋದಿ ಸರ್ಕಾರದ ಈ ಪುಂಖಾನುಪುಂಖ ಸುಳ್ಳುಗಳನ್ನು ನಿಜವೆಂದೇ ನಂಬುತ್ತಿದ್ದಾರೆ. ಆದರೆ ಸತ್ಯ ಅರಿವಾಗುವಷ್ಟರಲ್ಲಿ ಕಾಲ ಮಿಂಚು ಹೋಗುವ ಮುನ್ನ ಈ ಅಭಿಯಾನದಲ್ಲಿ ಪಾಲುಗೊಂಡು ಮನುವಾದಿಗಳ ಕುತಂತ್ರಕ್ಕೆ ಬಲಿಯಾಗದೇ ನಾವೆಲ್ಲರೂ ಇಂದೇ ಎಚ್ಚೆತ್ತು ಕೊಳ್ಳುವ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣ.

  Like

 4. ABRAR AHMED says:

  ಕಪ್ಪು ಹಣ ಕೇವಲ ನೋಟಿನ ರೂಪದಲ್ಲಿ ಇಲ್ಲ. ಕಪ್ಪು ನೋಟಿಗಿಂತಲೂ ಹೆಚ್ಚಾಗಿ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮಾಡಿಟ್ಟುಕೊಂಡಿದ್ದಾರೆ. ರಿಯಲ್ ಎಸ್ಟೇಟ್, ಶೇರು ಮಾರುಕಟ್ಟೆ , ವೈದ್ಯಕೀಯ ಕಾಲೇಜುಗಳಲ್ಲಿನ ಕಪ್ಪು ಹಣ ಒಂದು ಕಡೆಯಾದರೆ, ಮತ್ತೂಂದು ಕಡೆ ಲಂಚ, ಭ್ರಷ್ಟಾಚಾರ, ಡ್ರಗ್ಸ್, ಹಫ್ತಾ ಮಾಫಿಯಾ ಇವೆಲ್ಲವೂ ಕಪ್ಪು ಹಣದ ಕರಾಳ ಮುಖಗಳು.

  Like

 5. ABRAR AHMED says:

  💡 *ನೋಟು ಅಮಾನ್ಯ*
  *ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ…*💡

  ✍🏻 *ಶಾಹುಲ್ ಹಮೀದ್ ಕಾಶಿಪಟ್ಣ # ಹೊಂಬೆಳಕು#*

  ನಮ್ಮ ಮೋಡರ್ನ್_ಫಕೀರ ರು ಕ್ಯಾಷ್ ಲೆಸ್ ಇಕೋನಮಿ ಮಾಡೋ ಬೇಸ್ ಲೆಸ್ ವಿಚಾರಗಳನ್ನು ಜನಸಾಮಾನ್ಯರ ಮೇಲೆ ಹೇರಲು ಹೊರಟಿದ್ದಾರೆ, ಮೊನ್ನೆತಾನೇ ಪೆಟ್ರೋಲ್ ಬಳಕೆಗೆ ಕಾರ್ಡು ಬಳಸಿದರೆ ೦.75% ಡಿಸ್ಕೌಂಟ್ ಘೋಷಸಿದೆ ಆದರೆ  ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಅಥವಾ ಡಿಸೇಲ್ ಖರೀದಿಸಿದರೆ 2.5 % ಸರ್ ಚಾರ್ಜ್ ಇರುತ್ತದೆ ಎಂಬುವುದೂ ಕೆಲವು ಭಕ್ತರಿಗೆ ಕಾರ್ಡು ಬಳಸಿದ ನಂತರವೇ ಗೊತ್ತಾಗಿದ್ದು ಪಾಪ‌…

  ಇನ್ನು ಕೆಲವು ಭಕ್ತರು ಚೆಕ್, ಡೆಬಿಟ್ ಕಾರ್ಡ್ , ಕ್ರೆಡಿಟ್ ಕಾರ್ಡ್ ನೆಪ್ಟ್ ಬಳಸಿ ಅನ್ನೋ ಸಲಹೆ ನೀಡಿ ಅಲ್ಲಲ್ಲಿ ತರಬೇತಿ ಶಿಬಿರವನ್ನೂ ತೆರೆಯುತ್ತಿದ್ದಾರೆ. ಜನಸಾಮಾನ್ಯರ ನಗು ಇಲ್ಲದಂತೆ ಮಾಡುವ ನಗದು ರಹಿತ ನಮೋ ತರಬೇತಿಯಿದು. ವಾಸ್ತವದಲ್ಲಿ ಭಾರತದ ಅರ್ದದಷ್ಟೂ ಜನರಿಗೆ ಇನ್ನೂ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಸಮರ್ಪಕವಾದ ಶಿಕ್ಷಣವೇ ಇಲ್ಲ. ಜನಧನ ಯೋಜನೆ ಬಂದಾಗ ಮೋದಿ 5000 ಕೊಡ್ತಾರೆ ಎಂದು ಬ್ಯಾಂಕ್ ಕಡೆ ಬಂದವರು ಈಗ ತಾವು ದುಡಿದ 1000 ರೂಪಾಯಿಗೂ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ. ಅದಕ್ಕಲ್ಲವೇ ಸೋಶಿಯಲ್ ಮೀಡಿಯಾದಲ್ಲಿ ಸಂತ್ರಸ್ತನೊಬ್ಬ ಸಂತನಂತೆ ಪೋಸ್ಟ್ ಹರಿಯಬಿಟ್ಟದ್ದು…”ಕ್ಯೂ ನಿವಾರಿಸಲು ವಿಜ್ಞಾನಿ ಎಟಿಎಂ ತೆರೆದ…ಅಜ್ಞಾನಿ ಮತ್ತೆ ಎಟಿಎಂ ಮುಂದೆ ಕ್ಯೂ ತರಿಸಿದ”..

  ಇನ್ನೂ ರಿಸರ್ವ್ ಬ್ಯಾಂಕ್ ಮಾಹಿತಿ ಪ್ರಕಾರ ಚಲಾವಣೆಯಲ್ಲಿರುವ 14.5 ಲಕ್ಷ ಕೋಟಿ ನೋಟುಗಳಲ್ಲಿ ಈಗಾಗಲೇ 12.5  ಲಕ್ಷ ಕೋಟಿಗಳು ಬದಲಾಗಿದ್ದು ಇನ್ನು 2 ಲಕ್ಷ ಕೋಟಿಗಳು ಮುಂದಿನ 20 ದಿವಸಗಳಲ್ಲಿ   ಬದಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಕಪ್ಪು ಹಣದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ವಿಫಲವಾಯಿತಲ್ಲವೇ? ಇನ್ನು ನೂರೋ ಇನ್ನೂರೊ ಕೋಟಿಯ ವಾಪಸ್ ಬಂದಿಲ್ಲವೆಂದರೂ ಆ ಮೊತ್ತವು ಹೊಸ ನೋಟಿನ‌ ಮುದ್ರಣಕ್ಕೆ ಬಳಸಿದ ವೆಚ್ಚಕ್ಕಿಂತ ಕಡಿಮೆಯೇ ಆಗಿರುತ್ತದೆ.

  ಇನ್ನು ಮಿತ್ರೋಂ  ಕ್ಯಾಷ್ ಲೆಸ್ ಕ್ಯಾಷ್ ಲೆಸ್  ಎಂದು ಉಪದೇಶ ನೀಡುವ ಪ್ರಧಾನರು, ದೇಶದಲ್ಲಿ ಅದೆಷ್ಟೋ ರಾಜಕಾರಣಿಗಳಿಗೂ ಕೂಡಾ ಮೊಬೈಲ್ ಬ್ಯಾಂಕಿಂಗ್ ತಂತ್ರಜ್ಞಾನದ ಬಳಕೆಗೆ ಬೇಕಾಗಿರುವಷ್ಟು ಶಿಕ್ಷಣ ಇಲ್ಲ ಎಂಬ ವಾಸ್ತವವನ್ನು ಮರೆತಿದ್ದಾರೆ. ನಮ್ಮ ದೇಶವನ್ನು 18 ತಿಂಗಳುಗಳ ಕಾಲ ಆಳಿದ ಮಾಜಿ ಪ್ರಧಾನಿ ದೇವೆಗೌಡರಿಗೂ ಕೂಡಾ ಮೊಬೈಲ್ ತಂತ್ರಜ್ಞಾನ ಬಳಸೋದು ಗೊತ್ತಿಲ್ಲವಂತೆ!  ಹಾಗಾದರೆ ಜನಸಾಮಾನ್ಯರ ಪಾಡೇನು?

  ಬೆಂಗಳೂರಿನಂತಹ ಮಹಾನಗರದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲೂ ಸುಮಾರು 20 ಲಕ್ಷ ರೂಪಾಯಿಯ ವಹಿವಾಟು ನಡೆಯುತ್ತದೆ. ಈ ಎಲ್ಲ ವ್ಯವಹಾರವನ್ನು ನಡೆಸುವ ರೈತರು, ಜಾನುವಾರು ಮಾರಾಟಗಾರರು, ಗ್ರಾಮೀಣ ಪ್ರದೇಶದ ಕೃಷಿ ಬೆಳೆಗಾರಾರು. ಇವರಿಗೆ ಮೊಬೈಲ್ ಬ್ಯಾಂಕಿಂಗ್ ಬಿಟ್ಟು ಸರಿಯಾದ ಬ್ಯಾಂಕು ಅಕೌಂಟ್ ಕೂಡಾ ಇರೋದಿಲ್ಲ. ವಾರದ ಸಂತೆ ಎಂಬುದು ರಾಜ್ಯದ ಎಲ್ಲ ಭಾಗಗಳಲ್ಲಿಯೂ ನಡೆಯುವ ಜನಸಾಮಾನ್ಯರ- ಗ್ರಾಮೀಣ ವ್ಯಾಪಾರ. ಇವೆಲ್ಲ ವ್ಯಾಪಾರವನ್ನು ರದ್ದುಗೊಳಿಸಿ ನೇರವಾಗಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಒದಗಿಸುವ ನಮೋ ತಂತ್ರವಾಗಿದೆ ಕ್ಯಾಶ್ ಲೆಸ್. 2017 ರ ವೇಳೆಗೆ 47 ಲಕ್ಷ ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಿರುವ ಬೃಹತ್ ಮಳಿಗೆಗಳಿಗೆ ಕ್ಯಾಶ್ ಲೆಸ್ ತಂತ್ರದ ಮೂಲಕ ಮೋದಿ ಸರಕಾರ ಚುನಾವಣಾ ಪ್ರಚಾರ ವೆಚ್ಚದ ಋಣ ತೀರಿಸುತ್ತಿದೆ. ಜೊತೆಗೆ ವಿದೇಶ ಸುತ್ತಲು ಮೋದಿಗೆ 800 ಕೋಟಿ ರೂಪಾಯಿ ವ್ಯಯಿಸಿರುವ ದೈತ್ಯ ಕಂಪೆನಿಗಳ ಮಾಲಕರ ಋಣವನ್ನೂ ಇನ್ನಷ್ಟು ಇಂತಹ ”ನಗ”ದು ರಹಿತ ಯೋಜನೆಗಳು ಜಾರಿಗೆ ಬರಲಿವೆ.

  ನೋಟ್ ರದ್ದು ಮಾಡಿ ಕಾಳಧನವನ್ನು ಭ್ರಷ್ಟಾಚಾರ ಕೊನೆಗೊಳಿಸುತ್ತೇನೆ ಎಂಬ ತೀರ್ಮಾನ,  ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ ಗೆ ವರ್ಗಾಯಿಸಿದತುಘಲಕ್ ನ ಮೂರ್ಖ ತೀರ್ಮಾನದಂತಾಗಿರುವುದು ಸುಳ್ಳಲ್ಲ. ಭಾರತದ ಸುಪ್ರೀಂ ಕೋರ್ಟು ನೋಟ್ ಅಮಾನ್ಯ ವಿಷಯದಲ್ಲಿ ಜನಸಾಮಾನ್ಯರಿಗೆ ಆಗೋ ತೊಂದರೆ ನಿವಾರಿಸಿ ಇಲ್ಲದಿದ್ದಲ್ಲಿ ನಾವು ಆದೇಶ ಹೊರಡಿಸಬೇಕಾಗಬಹುದು ಎಂದು ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿ ಎಚ್ಚರಿಸಿದೆ. ಭ್ರಷ್ಟಾಚಾರದ ವಿರುದ್ದದ ಸರ್ಜಿಕಲ್ ಸ್ಟ್ರೈಕ್ ಎಂದು ಬೊಬ್ಬೆ ಇಡುವ ಭಕ್ತರು ನೋಟು ಪ್ರಿಂಟ್ ಮಾಡಲು ಪೇಪರನ್ನು ಭಾರತದಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾದ ಕಂಪನಿಯಿಂದ ತರಿಸಲಾಗುತ್ತಿದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಅಂಧರಾಗಿಬಿಟ್ಟಿದ್ದಾರೆ. ಅಂಧ ಯೋಜನೆ ಅಂಧರಿಗಷ್ಟೇ ಅಂದವಾಗಿ ಕಾಣಲು ಸಾಧ್ಯ.  

  http://www.fb.com/hombellaku

  Like

 6. ABRAR AHMED says:

  ಈಗಾಗಲೇ ಸ್ಪಷ್ಟಪಡಿಸಿರುವಂತೆ ಇಡೀ ನೋಟು ರದ್ದತಿಯ ನಿರ್ಧಾರ ಸಾಪ್ಟ್ ವೇರ್ ಉದ್ಯಮಕ್ಕೆ ಅನಿರೀಕ್ಷಿತ ಪವಾಡಸದೃಶ ಅವಕಾಶಗಳನ್ನು ಸೃಷ್ಟಿಸಿ ಕೊಡುವ ಪ್ರಯತ್ನ ಎನ್ನುವುದು ಉದ್ಯಮರಂಗವೇ ಸ್ಪಷ್ಟಪಡಿಸಿದೆ. ನಗದುರಹಿತ ಪಾವತಿಯಿಂದ ಕೆಲ ಪ್ರಯೋಜನೆ ಕೆಲವು ಮಂದಿಗೆ ಇರಬಹುದು. ಆದರೆ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿ ಏಕದೃಷ್ಟಿಯಿಂದ ಅದನ್ನು ಉತ್ತೇಜಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಬೇಕಾಗಿಲ್ಲ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s