ದೇಶದ ಆರ್ಥಿಕತೆಯ ಮೇಲೆ ಆಗಿರುವ ಪರಿಣಾಮಗಳು Effects On The Nation’s Economy

ನೋಟು ರದ್ದತಿಯಿಂದ ದೇಶಕ್ಕಾದ ನಷ್ಟದ ಪ್ರಮಾಣದ ಕುರಿತು ಪರಿಣಿತರು ಏನು ಹೇಳುತ್ತಾರೆ?

ನೋಟು ಅಮಾನ್ಯೀಕರಣವಾದ ಮೂರು ದಿನಗಳಲ್ಲಿಯೇ ದೇಶದ ಪ್ರಜ್ಞಾವಂತ ನಾಗರೀಕರು ಅದರ ಹಾನಿಗಳನ್ನು ಅಂದಾಜಿಸಿದರು. ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕøತ ಅಮತ್ರ್ಯಸೇನ್ರವರೇ ಅದನ್ನು ಖಂಡಿಸಿದರು. ಆದರೆ ಅದನ್ನು ಸರ್ಕಾರದ ಯಾವ ಅಂಗಗಳೂ ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಈಗ ಪ್ರಮುಖ ಆರ್ಥಿಕ ಅಧ್ಯಯನ ಸಂಸ್ಥೆಗಳೇ ನೋಟು ಅಮಾನ್ಯೀಕರಣದಿಂದಾಗಿ ದೇಶದ ಜಿಡಿಪಿ ತೀವ್ರ ಪೆಟ್ಟು ತಿಂದಿದ್ದನ್ನು ತಿಳಿಸಿವೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇನ್ನೂ ಪೆಟ್ಟು ತಿನ್ನುವ ಸಾಧ್ಯತೆಗಳನ್ನು ಸ್ಪಷ್ಟೀಕರಿಸುತ್ತಿವೆ.
• IMIE (Institute for Monitoring Indian Economy) ಪ್ರಕಾರ ನೋಟು ಅಮಾನ್ಯದಿಂದಾಗಿ ಮುಂದಿನ 5 ವರ್ಷಗಳಲ್ಲಿ GDP ದರ ಶೇ. 6.6 ನ್ನು ಮೀರುವುದಿಲ್ಲ. ಹಾಗೂ ದೇಶಕ್ಕೆ ಅಂದಾಜು 10 ಲಕ್ಷ ಕೋಟಿ ನಷ್ಟವಾಗಲಿದೆ.
• IMF ಪ್ರಕಾರ ಮುಂದಿನ ವರ್ಷವೂ ಜಿಡಿಪಿ ದರ ಶೇ. 0.4 ರಷ್ಟು ನಷ್ಟ ಅನುಭವಿಸಲಿದೆ.
• ನೋಟು ನಿಷೇಧದಿಂದ 4 ಲಕ್ಷಕೋಟಿ ಕಪ್ಪು ಹಣ ಪತ್ತೆಯಾಗುತ್ತದೆಂದು RBI ಹೇಳಿಕೊಂಡಿತ್ತು. ಆದರೆ 50 ದಿನಗಳ ನಂತರ ಶೇ.97 ರಷ್ಟು ಹಣ ವಾಪಾಸ್ ಬಂದಿದೆ. ಅಂದರೆ ಕಪ್ಪುಹಣ, ನಕಲಿ ನೋಟು ಎಲ್ಲವೂ ವಾಪಸ್ ಬ್ಯಾಂಕ್ ವ್ಯವಸ್ಥೆಗೆ ಮರಳಿದೆ. ಅದಕ್ಕಾಗಿಯೇ ಇಷ್ಟು ದಿನವಾದರೂ RBI ಅಂಕಿ-ಅಂಶ ನೀಡಿಲ್ಲ.
• ಅಷ್ಟೇ ಅಲ್ಲ RBI ಮತ್ತೊಂದು ಹೇಳಿಕೆ ನೀಡಿದೆ. ಬ್ಯಾಂಕುಗಳಲ್ಲಿ ನಕಲಿ ನೋಟು ಜಮೆ ಆಗಿರುವ ಸಾಧ್ಯತೆ ಇದ್ದು ಅದನ್ನು ಪತ್ತೆ ಹಚ್ಚಲು ದಿನಕ್ಕೆ 12 ಗಂಟೆಗಳು ಕೆಲಸ ಮಾಡಿದರೂ 600 ದಿನಗಳು ಅಂದರೆ ಎರಡು ವರ್ಷ ಬೇಕಂತೆ!!
ಪ್ರದಾನಿ ಮೋದಿಯವರು ಈ ನೋಟು ನಿಷೇಧದಿಂದ 100 ಕ್ಕೂ ಹೆಚ್ಚು ಭಾರತದ ನಾಗರೀಕರ ಜೀವ ಬಲಿ ಪಡೆದು. 125 ಕೋಟಿ ಜನರ ಬದುಕಿನೊಂದಿಗೆ ಆಟವಾಡಿ ಪತ್ತೆ ಹಚ್ಚಿದ್ದು 800 ರಿಂದ 1000 ಕೋಟಿ ಕಪ್ಪುಹಣವನ್ನು ಅಷ್ಟೆ!!!

ಯಾವುದೇ ಪೂರ್ವಸಿದ್ಧತೆಯಿಲ್ಲದೆ ಮೋದಿಯವರು ಕೈಗೊಂಡ ಈ ಹಠಾತ್ ಕ್ರಮದಿಂದಾಗಿ ಲಕ್ಷಾಂತರ  ಜನಸಾಮಾನ್ಯರ ಮೂರಾಬಟ್ಟೆಯಾಗಿರುವುದೂ ಈಗ ನಮ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿದೆ.
 ಕನಿಷ್ಟ ನೂರು ಜನ ಎಟಿಮ್ ಮತ್ತು ಬ್ಯಾಂಕ್ ಸಾಲುಗಳಲ್ಲಿ ನಿತ್ರಾಣಗೊಂಡೋ ಅಥವಾ ಅವಶ್ಯಕ ಗಳಿಗೆಯಲ್ಲಿ ಹಣ ಸಿಗದ ಆಘಾತದಿಂದಲೋ ಜೀವಬಿಟ್ಟಿದ್ದು ನಮ್ಮ ಕಣ್ಣಮುಂದೆಯೇ ಇದೆ.
ಇದಕ್ಕಿಂತ ಎಷ್ಟೋ ಸಾವಿರ ಪಟ್ಟು ಜನ ಬದುಕಲಿಕ್ಕೇ ಕಷ್ಟ ಪಡುವಂತ ಸನ್ನಿವೇಶ ಸೃಷ್ಟಿಯಾಗಿರುವುದು ಈಗೀಗ ಹೆಚ್ಚು ನಿಚ್ಚಳವಾಗತೊಡಗಿದೆ.
ಈ ನೋಟುರದ್ದತಿಯ ಪರಿಣಾಮಗಳಿಂದಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗಾಗಿ ಕಷ್ಟಪಡುತ್ತಿರುವುದು ನಮಗೆ ತಿಳಿಯತೊಡಗಿದೆ. ಮುಂದೆ ಇನ್ನೂ ಲಕ್ಷಾಂತರ ಜನ ಕೆಲಸ ಕಳೆದುಕೊಳ್ಳಲ್ಲಿದ್ದಾರೆಂದು ಅನೇಕ ವರದಿಗಳು ಮತ್ತು ಅಂಕಿಅಂಶಗಳು ಹೇಳುತ್ತಿವೆ.
ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇನೆಂದು ಹೇಳಿ ಪ್ರಧಾನಿಯಾದ ಮೋದಿಯವರು ತಮ್ಮ ಜನವಿರೋಧಿ ಕ್ರಮದಿಂದಾಗಿ ಲಕ್ಷ ಲಕ್ಷ ಜನರ ಇರುವ ಕೆಲಸವನ್ನೂ ಕಿತ್ತುಕೊಳ್ಳುವಂತಾಗಿದ್ದು ಒಂದು ಕ್ರೂರ ವ್ಯಂಗ್ಯವಾಗಿದೆ.
ಅಖಿಲ ಭಾರತ ತಯಾರಕರ ಒಕ್ಕೂಟದವರು  (AIMO) ತಯಾರಿಸಿದ ವರದಿಯಂತೆ ನೋಟುರದ್ದತಿಯ 34 ದಿನಗಳಲ್ಲಿ 35% ಉದ್ಯೋಗ ನಷ್ಟವೂ ಮತ್ತು 50% ಆದಾಯದಲ್ಲಿನ ಇಳಿಕೆಯೂ ಉಂಟಾಗಿದ್ದು, ಮಾರ್ಚಿ 2017 ರ ವೇಳೆಗೆ ಕ್ರಮವಾಗಿ 60% ಮತ್ತು 55% ಮುಟ್ಟಲಿದೆ.
AIMO ದೇಶಾದ್ಯಂತ ಒಟ್ಟು ಮೂರು ಲಕ್ಷ ಸಣ್ಣ, ಅತಿಸಣ್ಣ, ಮಧ್ಯಮ ಮತ್ತು ಭಾರೀ ತಯಾರಿಕಾ ಉದ್ಯಮಗಳನ್ನು ಪ್ರತಿನಿಧಿಸುತ್ತಿದ್ದು, ಬಹುತೇಕ ಎಲ್ಲ ವಲಯಗಳಲ್ಲಿನ ಪರಿಣಾಮಗಳ ಹಿನ್ನೆಲೆಯಲ್ಲಿ ಈ ವರದಿ ತಯಾರಿಸಿದೆ.
 Economic census ಆಧಾರದಂತೆ ಭಾರತದ ಒಟ್ಟು ಕಾರ್ಮಿಕರಲ್ಲಿ ಬಹುತೇಕ 82% ಮಂದಿ ಅಸಂಘಟಿತ ವಲಯದಲ್ಲೇ ದುಡಿಯುತ್ತಿದ್ದಾರೆ. ಅಸಂಘಟಿತ ವಲಯ ತನ್ನ ಬಹುತೇಕ ವ್ಯವಹಾರಗಳಿಗೆ ನಗದನ್ನೆ ಅವಲಂಬಿಸಿದ್ದು, ನೋಟುರದ್ದತಿಯ ಪರಿಣಾಮ ಇಡೀ ವಲಯ ಬಹುತೇಕ ಸ್ತಬ್ಧವಾಗಿದೆ. ಹಾಗಾಗಿ ಲಕ್ಷಾಂತರ ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆಂದು AIMO ವರದಿ ತಿಳಿಸುತ್ತದೆ.
ಗಾರ್ಮೆಂಟ್ಸ್, ರಫ್ತುವಲಯ, ಕಟ್ಟಡ ನಿರ್ಮಾಣ ಮತ್ತು ಇತರ ಅನೇಕ ಉದ್ದಿಮೆಗಳಿಗೆ ಹೊಡೆತ ಬಿದ್ದಿದ್ದು ಅವುಗಳ ಉತ್ಪನ್ನವೂ ಕುಂಠಿತಗೊಡಿರುವುದರಿಂದ ದೇಶದ ಆರ್ಥಿಕತೆಯ ಮೇಲೂ ಭಾರೀ ಪರಿಣಾಮ ಬೀರಲಿದೆಯೆಂದು ವರದಿ ತಿಳಿಸುತ್ತಿದೆ.
AIMO ಈಗಾಗಲೇ ಮೂರು ಬಾರಿ (Nov 12, 25 and Dec 12) ವರದಿ ತಯಾರಿಸಿ ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಸಚಿವಾಲಯಕ್ಕೆ ಕಳುಹಿಸಿದ್ದರೂ, ಕೇಂದ್ರ ದಿವ್ಯ ಮೌನ ವಹಿಸಿರುವುದು ಈ ಸರ್ಕಾರ ಜನಪರವೋ ಅಥವಾ ಜನವಿರೋಧಿಯೋ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಸಣ್ಣ ಮತ್ತು ಮಧ್ಯಮ ಗಾತ್ರದ ತಯಾರಿಕಾ ಉದ್ಯಮಗಳು ಸ್ಥಗಿತಗೊಳ್ಳಲು ಈ ಕೆಳಗಿನ ಕಾರಣಗಳನ್ನು AIMO ಗುರುತಿಸಿದೆ.
ತಯಾರಿಕಾ ಕೆಲಸಕ್ಕೆ ಬೇಕಾದ ಮೂಲವಸ್ತುಗಳ ಖರೀದಿಗೆ ನಗದಿನ ಅಭಾವ,
ಅಗತ್ಯ ನಗದು ಪಡೆಯಲು ಬ್ಯಾಂಕ್ ಸಾಲಿನಲ್ಲಿ ನಿಲ್ಲಬೇಕಾದ ಕಾರಣಕ್ಕೆ ಕೆಲಸಕ್ಕೆ ಬಾರದ ಕಾರ್ಮಿಕರು, ಡಾಲರಿನೆದುರು ದುರ್ಬಲವಾದ ರೂಪಾಯಿ ಮೌಲ್ಯ,
ಕಾರ್ಯವಾಹಿ ಬಂಡವಾಳವನ್ನು  (Working capital) ಸಂಗ್ರಹಿಸಲಾಗದ ಪರಿಸ್ಥಿತಿ ಮತ್ತು
ಹೊಸ ಉದ್ಯಮ ಪ್ರಾರಂಭಿಸಲು ಅಥವಾ ಇರುವ ಉದ್ಯಮವನ್ನು ವಿಸ್ತರಿಸಲು ಬ್ಯಾಂಕ್ ಸಾಲ ಪಡೆಯಲಾಗದ ಸ್ಥಿತಿ.
ಹೀಗೆ ಹಲವು ಕಾರಣಗಳನ್ನು ಪಟ್ಟಿ ಮಾಡುವ AIMO, ಸಾಮಾನ್ಯ ಸ್ಥಿತಿ ಹಿಂದಿರುಗಲು ಒಂದೆರಡು ವರ್ಷವಾದರೂ ಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸುತ್ತಿದೆ.
ಒಟ್ಟಿನಲ್ಲಿ ಮೋದೀಜೀಯವರ ನೋಟುರದ್ದತಿ ಕ್ರಮವು ತಾನು ಹೇಳಿದ ಯಾವ ಆಶಯಗಳನ್ನು ಈಡೇರಿಸದಿದ್ರೂ, ಅಸಂಖ್ಯಾತ ಜನರ ಬದುಕನ್ನು ಕಸಿಯುವಲ್ಲಿ ಮಾತ್ರ ಯಶಸ್ವಿಯಾಗಿದೆ.
ಪ್ರಧಾನಿ ಮೋದಿ ನಮ್ಮ ಜನರ ಕಷ್ಟವನ್ನು ಗುರುತಿಸಲೂ ತಯಾರಿಲ್ಲದಂತ ನೋವಿನ ಸನ್ನಿವೇಶದಲ್ಲಿ, ನಾವೆಲ್ಲಾ ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಆ ಮೂಲಕ ಕಷ್ಟಕ್ಕೊಳಗಾದ ಜನರ ಬದುಕು ಸ್ವಲ್ಪಮಟ್ಟಿಗಾದರೂ ಸುಧಾರಿಸುವಂತೆ ನೋಡಿಕೊಳ್ಳಬೇಕಾಗಿದೆ.

 

MUMBAI: The mazdoor naka near Bhandup’s Madhuban garden was once among the largest in the city, with nearly 500 construction labourers thronging here every morning. Masons, helpers, loaders, tile-polishers would spill onto the roads as early 7.30 am to strike a deal for a days’ work with contractors.Now there is just a trickle of 30 workers here. After demonetisation, job offers at this informal labour market have dried up. The currency crunch has meant contractors have no cash to pay daily-wagers. Incomes have dropped by 80-90% as a result. Mason’s helpers who earned Rs 10,000-15,000 a month made just Rs 1000-Rs 2000 in November.

Source: Jobless, these labourers can barely get one meal a day By Priyanka Kakodkar. Times of India.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s